ದೂರದೃಷ್ಟಿ ಮತ್ತು ಧ್ಯೇಯೋದ್ದೇಶಗಳು

ದೂರದೃಷ್ಟಿ

  • ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಉಚಿತ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಖಾತ್ರಿಗೊಳಿಸುವುದು.
  • ಕಾಲಕಾಲಕ್ಕೆ ರಾಜ್ಯ ಶಿಕ್ಷಣ ನೀತಿಯಲ್ಲಿ ಸಮರ್ಪಕ ತಿದ್ದುಪಡಿ ಮಾಡಿ ಶಿಕ್ಷಣದ ಗುಣಮಟ್ಟವನ್ನು ವಿಶ್ವದರ್ಜೆಗೆ ಏರಿಸುವುದು.
  • ಕರುನಾಡ ಮಕ್ಕಳ ಉಜ್ಜ್ವಲ ಭವಿಷ್ಯಕ್ಕಾಗಿ, ಈ ಹಿಂದೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಪೂನಃಶ್ಚೇತನಗೊಳಿಸುವುದು.

ಧ್ಯೇಯೋದ್ದೇಶಗಳು

  • ನಮ್ಮ ಭವಿಷ್ಯದ ಹೊಂಗನಸನ್ನು ಸಾಕಾರಗೊಳಿಸಲು ನಾವು ಜನಾಂದೋಲನವನ್ನು ಮಾಡುವುದು.
  • ಶಿಕ್ಷಣದ ಮಹತ್ತ್ವದ ಬಗ್ಗೆ ಜನರಲ್ಲಿ ಅರಿವುಮೂಡಿಸುವುದು .
  • ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾದ ಹೊಣೆಗಾರಿಕೆಯನ್ನು ಚುನಾಯಿತ ಪ್ರತಿನಿಧಿಗಳಿಗೆ ಮನದಟ್ಟುಮಾಡಿಸುವುದು.
  • ಕಾಲಕಾಲಕ್ಕೆ ರಾಜ್ಯ ಶಿಕ್ಷಣ ನೀತಿಯಲ್ಲಿ ತಿದ್ದುಪಡಿ ಮಾಡುವಾಗ ನಾಗರಿಕರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು.
  • ಸಂಘ ಸಂಸ್ಥೆಗಳು ಹಾಗು ಯಾವುದೇ ವ್ಯಕ್ತಿಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿ ಮಾಡುವಂತೆ ಉತ್ತೇಜಿಸುವುದು.
  • ಶಿಕ್ಷಣ ಕ್ಷೇತ್ರದಲ್ಲಿ ಸಮರ್ಥ ನಾಯಕರನ್ನು ಬೆಳೆಸಿ ಅವರಿಂದ ರಾಜ್ಯದ ಶಿಕ್ಷಣ ವ್ಯವಸ್ಥೆಯ ಸರ್ವೋತೋಮುಕ ಅಭಿವೃದ್ಧಿಯಾಗುವಂತೆ ಶ್ರಮಿಸುವುದು.