ಮಾಧ್ಯಮದಲ್ಲಿ – ಆನ್ಲೈನ್ನಲ್ಲಿ

ಕಾಸರಗೋಡು ಶಾಲೆ ಚಿತ್ರವೇ ಸ್ಫೂರ್ತಿ… ಸರ್ಕಾರಿ ಶಾಲೆ ಉಳಿಸಲು ಅನಿಲ್ ಶೆಟ್ಟಿ ಪಣ | ಕನ್ನಡ ಈನಾಡು ಇಂಡಿಯಾ

ಗಡಿನಾಡು ಕೇರಳದ ಕಾಸರಗೋಡಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಎದುರಿಸುತ್ತಿರುವ ಸಮಸ್ಯೆ ಇಟ್ಟುಕೊಂಡು ನಿರ್ದೇಶಕ ರಿಷಭ್ ಒಂದೊಳ್ಳೆಯ ಸಿನಿಮಾ ಮಾಡಿದ್ದಾರೆ. ಸದ್ಯ ಈ ಚಿತ್ರ ನೋಡುಗರಲ್ಲಿ ಮನರಂಜನೆಯ ಜತೆಗೆ ಕನ್ನಡ ಶಾಲೆ ಉಳಿಸುವ ಕಿಚ್ಚನ್ನು ಹಚ್ಚುತ್ತಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಮಂಗಳೂರಿನ ಅನಿಲ್ ಶೆಟ್ಟಿ.

ಸರ್ಕಾರಿ ಶಾಲೆ ದತ್ತು ಪಡೆದ ಪ್ರಣೀತಾ | ವಿಜಯವಾಣಿ

ಬೆಂಗಳೂರು: ಸೆಲೆಬ್ರಿಟಿಗಳ ಜನ್ಮದಿನ ಅಂದರೆ ಅಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅದೇ ರೀತಿ ಇಂದು (ಅ. 17) 26ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಲಿರುವ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಸಹ ವಿಶೇಷವಾದದ್ದನ್ನೇ ಮಾಡಲು ಹೊರಟಿದ್ದಾರೆ. ಅಂದರೆ, ಹಾಸನ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಏಳಿಗೆಗಾಗಿ ಶ್ರಮಿಸಲಿದ್ದಾರೆ. ಪ್ರತಿ ವರ್ಷ ಅದೇ ಕೇಕ್ ಕಟಿಂಗ್, ಅಭಿಮಾನಿಗಳ ಜತೆ ಸೆಲ್ಪಿ ಪೋಸ್ ನೀಡುತ್ತಿದ್ದ ಪ್ರಣೀತಾ, ಹಳ್ಳಿಗಾಡಿನ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ. ಆ ಕಾರಣಕ್ಕೆ ಶಾಲೆ ದತ್ತು ಪಡೆವ ನಿರ್ಧಾರಕ್ಕೆ ಬಂದಿದ್ದಾರೆ.

9 ದಿನಗಳಲ್ಲಿ 1 .೫ ಲಕ್ಷ ಮಿಸ್ಸ್ಡ್ ಕಾಲ್! ಪ್ರಜಾವಾಣಿ

ಮಂಗಳೂರು: ‘ಹೊಸ ಶಿಕ್ಷಣ ನೀತಿ’ ಜಾರಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಬಂಟ್ವಾಳದ ಪ್ರಕಾಶ್ ಅಂಚನ್ ಮತ್ತು ಬೆಂಗಳೂರಿನ ಅನಿಲ್ ಶೆಟ್ಟಿ ಆರಂಭಿಸಿರುವ ‘ಸರ್ಕಾರಿ ಶಾಲೆ ಉಳಿಸಿ’ ಆಂದೋಲನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆಂದೋಲನ ಬೆಂಬಲಿಸಿ 9 ದಿನಗಳಲ್ಲಿ 1.15 ಲಕ್ಷ ‘ಮಿಸ್ಡ್ ಕಾಲ್’ ದಾಖಲಾಗಿದೆ.

ಸರ್ಕಾರಿ ಶಾಲೆ ದತ್ತು ಪಡೆದ ಪ್ರಣೀತಾ, ಇತರೆ ಸೆಲಬ್ರಿಟಿಗಳಿಗೆ ಮಾದರಿಯಾದ ನಟಿ! ಕನ್ನಡ ಪ್ರಭಾ

ಬೆಂಗಳೂರು: ಕನ್ನಡ ನಟಿ ಪ್ರಣೀತಾ ಸುಬಾಷ್ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಹಾಸನ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಪ್ರಣೀತಾ ಅದರ ಮೂಲಸೌಕರ್ಯ ಅಭಿವೃದ್ದಿಗಾಗಿ ವೈಯುಕ್ತಿಕವಾಗಿ ಐದು ಲಕ್ಷ ರು. ನೀಡಿದ್ದಾರೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಗಿಣಿ ದ್ವಿವೇದಿ ನಿರ್ಧಾರ | ಜಿ ನ್ಯೂಸ್

ಸ್ಯಾಂಡಲ್’ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈಗ ಸಮಾಜ ಸೇವೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಕೆಲವು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿದ್ದು, ‘ಸರ್ಕಾರಿ ಶಾಲೆ ಉಳಿಸಿ’ ಆಂದೋಲನ ಆರಂಭಿಸಿದ್ದಾರೆ.

ಸರ್ಕಾರಿ ಶಾಲೆಗಳಿಗಾಗಿ ಟೊಂಕ ಕಟ್ಟಿದ ರಾಗಿಣಿ | ವಿಜಯಕರ್ನಾಟಕ

ನಟಿ ರಾಗಿಣಿ ಈಗ ಸರ್ಕಾರಿ ಶಾಲೆಯ ಕಡೆ ಗಮನ ಹರಿಸಿದ್ದಾರೆ. ನಟನೆಯ ಜತೆಯಲ್ಲೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಟಿ ಈಗ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಕೈ ಜೋಡಿಸಿದ್ದಾರೆ.

ಸರ್ಕಾರಿ ಶಾಲೆ ಉಳಿಸಿ, ಬೆಳೆಸಲು ‘ಹೊಸ ಶಿಕ್ಷಣ ನೀತಿ’ ಜಾರಿಗೆ ಆಗ್ರಹ

ಸರ್ಕಾರಿ ಶಾಲೆ ಉಳಿಸಿ, ಬೆಳೆಸಲು ‘ಹೊಸ ಶಿಕ್ಷಣ ನೀತಿ’ ಜಾರಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಸಮಾಜಮುಖಿ ಸಂಘಟನೆ ಮತ್ತು ಶಿಕ್ಷಣ ಪ್ರೇಮಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಸಮಾವೇಶಗೊಂಡು ಚರ್ಚಿಸಿದರು. ಈ ಸಂಘಟನೆಗಳು ಆರಂಭಿಸಿರುವ ‘ಮಿಸ್ಡ್‌ ಕಾಲ್ ಆಂದೋಲನ’ಕ್ಕೆ ಈವರೆಗೂ 2 ಲಕ್ಷಕ್ಕೂ ಹೆಚ್ಚು ಜನ ಸ್ಪಂದಿಸಿದ್ದಾರೆ. ಆಂದೋಲನದ ಪ್ರಚಾರಕ ಅನಿಲ್ ಶೆಟ್ಟಿ, ‘ನಮ್ಮ ಅಭಿಯಾನ ಸರ್ಕಾರದ ವಿರುದ್ಧವಲ್ಲ.

ಸರಕಾರಿ ಶಾಲೆ ಉಳಿಸಲು ವಿಧಾನಸೌಧಕ್ಕೆ ಕಾಲ್ನಡಿಗೆ | ಉದಯವಾಣಿ

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ಒತ್ತಾಯಿಸಿ ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಂಘಟನೆ ಸೆ.8ರಂದು ವಿಧಾನಸೌಧಕ್ಕೆ ಕಾಲ್ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಆಂದೋಲನದ ಅನಿಲ್‌ ಶೆಟ್ಟಿ ಮಾತನಾಡಿ, ರಾಜ್ಯದ ಅನೇಕ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಲಾಗಿದೆ.

ಸರ್ಕಾರದ ಉತ್ತಮ ನಡೆ

ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಹಕ್ಕೊತ್ತಾಯಕ್ಕೆ ಪೂರಕ ಪ್ರತಿಕ್ರಿಯೆ.