ಸಂಸ್ಥಾಪಕರು

ಅನಿಲ್ ಶೆಟ್ಟಿ ಒಂದು ಸಾಮಾನ್ಯ ಮಧ್ಯಮ ಬೇಸಾಯಗಾರ ಕುಟುಂಬದಲ್ಲಿ ಜನಿಸಿ ಕಷ್ಟದಲ್ಲಿ ಬಾಲ್ಯವನ್ನ ಕಳೆದವರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಎಂಬ ಕುಗ್ರಾಮದಲ್ಲಿ ಬೆಳದ ಅನಿಲ್ ಹತ್ತಿರದ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದರು. ಪ್ರತಿನಿತ್ಯ ಸುಮಾರುದು ಕಿಲೋ ಮೀಟರ್ ನಡೆದೇ ಹೋಗಬೇಕಿತ್ತು. ಇವರ ಮನೆ ಇದ್ದದ್ದು ಗುಡ್ಡಗಾಡು ಪ್ರದೇಶವಾಗಿರುವುದರಿಂದ ವಿದ್ಯುತ್ ಶಕ್ತಿಯಾಗಲಿ, ಟಿವಿ ಅಥವಾ ಟೆಲಿಫೋನ್ ಇರಲಿಲ್ಲ. ಸೀಮೆ ಎಣ್ಣೆ ದೀಪದಲ್ಲಿ ಓದಿ ಕಲಿತರು. ಹೊರಪ್ರಪಂಚದ ಯಾವುದೇ ಜ್ಞಾನವಿಲ್ಲದೆ ಬಡತನದಲ್ಲೇ ತಮ್ಮ ವಿದ್ಯಾರ್ಥಿ ಜೀವನವನ್ನ ಕಳೆದ ಅನಿಲ್ ಶೆಟ್ಟಿ ಅವರು ಇದ್ದಿದ್ದು ಕೇವಲ ಎರಡು ಜೊತೆ ಸಮವಸ್ತ್ರ. ಕಾಲೇಜು ಶಿಕ್ಷಣ ಸ್ವೀಕರಿಸಲು ಇವರಲ್ಲಿ ಹಣ ಇರಲಿಲ್ಲ. ಕುಟುಂಬದ ಆದಾಯ ಕಡಿಮೆ ಇದ್ದರಿಂದ ಬ್ಯಾಂಕ್ ಸಾಲ ನೀಡಲಿಲ್ಲ. ತಮ್ಮ ಸಂಭಂದಿಕರೊಬ್ಬರಿಂದ ಸಾಲ ಪಡೆದು ಎಂ. ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಒಫ್ ಟೆಕ್ನಾಲಜಿಯಲ್ಲಿ ತಾಂತ್ರಿಕ ವಿದ್ಯಾಭ್ಯಾಸಕ್ಕಾಗಿ ಸೇರಿಕೊಂಡರು. ಬಿಡುವಿನ ವೇಳೆಯಲ್ಲಿ ಸಂಬಂದಿಕರ ಸ್ವೀಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. 

ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಆಂಗ್ಲ ಭಾಷೆಯನ್ನು ಕಲಿತು ಕಾಲೇಜಿನಿಂದ ಹೊರ ಬಂದು ತಮ್ಮ ಸ್ವಂತ ಉದ್ಯಮವನ್ನು ಆರಂಭಿಸಿದರು. ಅನೇಕ ಏಳು ಬೀಳುಗಳನ್ನು ಕಂಡ ಅನಿಲ್ ಶೆಟ್ಟಿ ಇಪ್ಪತ್ತಮೂರನೆ ವಯಸ್ಸಿನಲ್ಲಿ ದೂರದ ಮುಂಬೈಗೆ ಪ್ರಯಾಣ ಬೆಳೆಸಿದರು. ಆಗ ಅವರ ಹತ್ತಿರ ಇದ್ದದ್ದು ಕೇವಲ ಐನೂರ ಐವತ್ತು ರೂಪಾಯಿಗಳು. ಮುಂಬೈನಲ್ಲಿ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು “ಫ್ಲೈ ವಿಥ್ ವಿ ಪಿ” ಎಂಬ ಉದ್ಯಮವನ್ನು ಕಟ್ಟಿ, ಬಾಲಿವುಡ್, ಕ್ರಿಕೆಟ್ ಮತ್ತು ದೊಡ್ಡ ಉದ್ಯಮಗಾರರ ಜೊತೆ ಒಪ್ಪಂದ ಮಾಡಿಕೊಂಡು ಹಿರಿಯ ನಂತರದ ಅಮಿತಾಬ್ ಬಚ್ಚನ್ ಅವರಿಂದ ಪ್ರಾರಂಭಿಸಿದರು. ತನ್ನ ಇಪ್ಪತ್ತೈದನೇ ವಯಸ್ಸಿನಲ್ಲಿ ಉದ್ಯಮದ ಅಗಾಧ ಜ್ಞಾನ ಸಂಪಾದಿಸಿಕೊಂಡ ಅನಿಲ್ ಇಂದು ಅನೇಕ ಸಂಸ್ಥೆಗಳಿಗೆ ಸಲಹಾಗಾರರಾಗಿದ್ದರೆ ಮತ್ತು ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡುತ್ತಿದ್ದಾರೆ. 

ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡುಪಾಗಿರಲು ನಿರ್ಧರಿಸಿ ಇಪ್ಪತ್ತೈದನೇ ವಯಸ್ಸಿನಲ್ಲಿ ಬೆಂಗಳೂರಿಗೆ ವಾಪಸ್ಸಾಗಿ ಅನೇಕ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡರು. 

ಆಟೋ ಚಾಲಕರ ಅಭಿವೃದ್ದಿಗಾಗಿಪೀಸ್ ಆಟೋಸಂಸ್ಥೆಯನ್ನು ಕಟ್ಟಿದರು ಮತ್ತು ಆಟೋ ರಿಕ್ಷಾ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸುವಂತೆ ಮಾಡಿದರು. ಅಷ್ಟೇ ಅಲ್ಲ ಬಸ್ ಚಾಲಕರ, ಪೊಲೀಸ್ ಕಾನ್ಸ್ಟೇಬಲ್, ಪೌರಕಾರ್ಮಿಕರ ಮತ್ತು ಅನೇಕ ಹಿಂದುಳಿದ ಜನರ ಏಳಿಗೆಗಾಗಿ ಶ್ರಮಿಸಿದರು ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುವುದರ ಮೂಲಕ ನೆರವಾದರು. 

 ಪ್ರತಿ ವರ್ಷ ನಮ್ಮ ಹೀರೋಗಳು ಎಂಬ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಡೆಸಿ ಸಮಾಜಕ್ಕಾಗಿ ದುಡಿದ ಕಾರ್ಮಿಕರನ್ನು ಸನ್ಮಾಸಿದ್ದಾರೆ. ತಮ್ಮ ಕಾರ್ಯಕ್ರಮದ ಫಲಿತಾಂಶವಾಗಿ ಪ್ರತಿಶಿತ ಬಿಪ್ಯಾಕ್ (ಬಿಪ್ಯಾಕ್) ಬ್ಯಾಂಗಲೋರ್ ಪೊಲಿಟಿಕಲ್ ಆಕ್ಷನ್ ಕಮಿಟಿ ಸಮಿತಿಯ ಅತಿ ಕಿರಿಯ ವಯಸ್ಸಿನ ಸದಸ್ಯರಾಗಿ ಗಣ್ಯ ವ್ಯಕ್ತಿಗಳಾದ ಬೈಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಷಾ ಮತ್ತು ನಿವೃತ್ತ ಇನ್ಫೋಸಿಸ್ ನಿರ್ದೇಶಕ ಮೋಹನ್ ದಾಸ್ ಪೈ ಅವರೊಂದಿಗೂ ಕೆಲಸ ಮಾಡಿದರು. ಬಿಪ್ಯಾಕ್ ಸಂಸ್ಥೆಯು ಬೆಂಗಳೂರಿನ ಅಭಿವೃದ್ದಿಗಾಗಿ ಕಾರ್ಯಪ್ರವೃತ್ತವಾಗಿದೆ. 

ಅನಿಲ್ ಮತ್ತು ಅವರ ತಂಡ ಅವಿರತ ಪರಿಶ್ರಮದಿಂದಾಗಿ ಬೆಂಗಳೂರು ನಗರಾದ್ಯಂತ  ಅಕ್ರಮ ಫ್ಲೆಕ್ಸ್ ಬ್ಯಾನರ್ ತೆರವು ಮಾಡಲಾಗಿದ್ದು ಕರ್ನಾಟಕದ ಉಚ್ಚ ನ್ಯಾಯಾಲಯವು ಫ್ಲೆಕ್ಸ್ ಬ್ಯಾನರ್ ನಿಷೇಧಿಸಿ ಆದೇಶವನ್ನ ಹೊರಡಿಸಿತು. ಅಕ್ರಮ ಫ್ಲೆಕ್ಸ್ ಬ್ಯಾನರ್ ನಿಂದ ಆಗುತ್ತಿರುವ ದೃಶ್ಯ ಮಾಲಿನ್ಯ ಮತ್ತು ರಾಜಕೀಯ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಇವರ ಪಾತ್ರ ಬಹುಮುಖ್ಯವಾಗಿತ್ತು. 

ಅನಿಲ್ ಶೆಟ್ಟಿ ಅವರು ಯುವ ಜನಾಂಗಕ್ಕೆ ಸ್ಪೂರ್ತಿದಾಯಕ ವ್ಯಕಿಯಾಗಿದ್ದು ಅವರು ಒಬ್ಬ ಅಗ್ರಗಣ್ಯ ಅಭಿಪ್ರಾಯಸಂಚಾಲಕರಾಗಿದ್ದರೆ. 2014  ರಲ್ಲಿ ಇವರು ಬೆಂಗಳೂರು ಯುವ ಜನೋತ್ಸವದ ಅಧ್ಯಕ್ಷರಾಗಿದ್ದರು. ಕಳೆದ ಇದು ವರ್ಷಗಳಲ್ಲಿ ಸುಮಾರು 400  ಕ್ಕೂ ಹೆಚ್ಚು ಸಾರ್ವಜನಿಕ ವೇದಿಕೆಗಲ್ಲಿ ಮಾತನಾಡಿದ ಅವರು ಜನರೊಂದಿಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. 

ಅಮೆರಿಕಾದ ಸ್ಟೇಟ್ ಡೆಪಾರ್ಟ್ಮೆಂಟಿನ ಆಹ್ವಾನದಿಂದ ಭಾರತ ದೇಶವನ್ನು ಪ್ರತಿನಿಧಿಸಿದ ಅನಿಲ್ ಶೆಟ್ಟಿ ಅವರು ತಮ್ಮ ದೇಶದ ಉನ್ನತ ವಿಚಾರಗಳ ಬಗ್ಗೆ ಅಲ್ಲಿನ ಜನರೊಂದಿಗೆ ಹಂಚಿಕೊಂಡರು. ನಾಯಕತ್ವದ ಮೇಲೆ ಆಯ್ಕೆ ಮಾಡುವ ಈ ಕಾರ್ಯಕ್ರಮದಲ್ಲಿ ಈ ಹಿಂದೆ ಇಂದಿರಾ ಗಾಂಧಿ, ನರೇಂದ್ರ ಮೋದಿ, ಪ್ರತಿಭಾ ಪಾಟೀಲ್ ಅಂತ ಮಹಾನ್ ಗಣ್ಯ ವ್ಯಕ್ತಿಗಳು ಅಲ್ಲಿ ಭಾಗವಹಿಸಿದ್ದರು. ಅಮೇರಿಕಾ ದೇಶದ ಅನೇಕ ಸಂಸ್ಥೆಗಳನ್ನು ಭೇಟಿ ಮಾಡಿ ಅನುಭವ ಪಡೆದುಕೊಂಡರು.

ಅನಿಲ್ ಓದುದರಲ್ಲಿ ಬಹು ಉತ್ಸುಕತೆಯನ್ನು ಹೊಂದಿದ್ದು ಜೊತೆಗೆ ಬರವಣಿಗೆಯಲ್ಲೂ ಹಿಂದೆ ಸರಿದಿಲ್ಲ. ಎರಡು ಪುಸ್ತಕಗಳನ್ನು ಬರೆದಿದ್ದು ಅದರ ಆದಾಯವನ್ನ ಸಮಾಜ ಸೇವೆಗೆ ಕೊಟ್ಟಿದ್ದರು. ಸಧ್ಯಕ್ಕೆ ಆಧ್ಯಾತ್ಮಿಕ ಜೀವನದ ಮೇಲೆ ಒಂದು ಪುಸ್ತಕವನ್ನು ಬರೆಯುತ್ತಿದ್ದಾರೆ. ಜ್ಞಾನ ಸಂಪಾದನೆಯಲ್ಲಿ ಅಗಾಧ ಆಸಕ್ತಿಯನ್ನು ಹೊಂದಿದ ಅನಿಲ್ ಈಗಾಗಲೇ ಪ್ರಪಂಚದ ಅನೇಕ ದೇಶಗಳನ್ನು ಸುತ್ತಿದ್ದು ಇನ್ನು ಮುಂಬರುವ ವರ್ಷದಲ್ಲಿ ಹೊಸ ಹೊಸ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿಯ ಬಗ್ಗೆ ತಿಳಿಯಲಿಚ್ಛಿಸಿದ್ದಾರೆ.

ಶುಚಿ ರುಚಿಯಾದ ನಿಯಮಿತ ಆಹಾರ ಮತ್ತು ಶುಭ್ರವಾದ ಬಟ್ಟೆಯನ್ನು ತೊಡುವ ಅನಿಲ್ ಶೆಟ್ಟಿ ಅವರು ವ್ಯಕ್ತಿತ್ವದ ಬೆಳವಣಿಗೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.

ಅನೇಕ ಸೃಜನಾತ್ಮಕ ವಿಷಯಗಳಲ್ಲಿ ಆಸಕ್ತಿ ಇರುವ ಅನಿಲ್ ಶೆಟ್ಟಿ ಅವರು ತಮ್ಮ ಜೀವನದ ಒಂದು ನಿಮಿಷವನ್ನು ಹಾಲು ಮಾಡಬಾರದೆಂದು ತಮ್ಮನ್ನ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಸರ್ಕಾರೀ ಶಾಲೆ ಉಳಿಸಿ ಆಂದೋಲನ ಪ್ರಾರಂಭಿಸಿ ಕರ್ನಾಟಕ ರಾಜ್ಯದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಪಣ ತೊಟ್ಟು ನಿಂತಿದ್ದಾರೆ.