ರಾಜ್ಯದ ಬಹುತೇಕ ಕಡೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳು ಬರುವುದು ಕಡಿಮೆಯಾಗಿ ಆ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾಗಿರುವ ಸಂದರ್ಭ ಇದು. ಈ ಸಮಯದಲ್ಲಿ ಸರ್ಕಾರ ಎಲ್ಲವನ್ನೂ ಸರಿಪಡಿಸಬೇಕು ಎಂದು ಸುಮ್ಮನೆ ಕೂರದೆ ಮಕ್ಕಳು ಕಡಿಮೆಯಾಗಿರುವ ಕೆಲವು ಶಾಲೆಗಳಿಗೆ ಬೇಕಾದಂತಹ ಒಳ್ಳೆಯ ಸೌಲಭ್ಯಗಳನ್ನು ನೀಡಿ, ಉತ್ತಮ ವಿದ್ಯಾಭ್ಯಾಸ ಸಿಗುವಂತೆ ಮಾಡಿ ಆ ಶಾಲೆಗಳನ್ನು ಉಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಒಬ್ಬ ವ್ಯಕ್ತಿ ಅನಿಲ್ ಶೆಟ್ಟಿ.
ಸರ್ಕಾರಿ ಶಾಲೆ ಉಳಿಸಿ – ಸ್ಯಾಂಡಲ್ವುಡ್ ಆಂದೋಲನ
ಕರ್ನಾಟಕ ಟಿವಿ : ನಾಡು-ನುಡಿ-ಜಲ-ಜನದ ವಿಚಾರದಲ್ಲಿ ಹೋರಾಟ ಅಥವಾ ಆಂದೋಲನ ರೂಪುಗೊಂಡಾಗ ಸ್ಯಾಂಡಲ್ವುಡ್ ಯಾವಾಗಲು ಸಿದ್ದವಿರುತ್ತೆ. ಇದೀಗ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಸ್ಯಾಂಡಲ್ವುಡ್ ಸ್ಟಾರ್ಸ್ ಕೈಜೋಡಿಸಿದ್ದಾರೆ. ಸೈಮಾ ಅವಾರ್ಡ್ ಪಡೆದ ಅಯೋಗ್ಯ ನಿರ್ದೇಶಕ ಮಹೇಶ್ ಗೌಡ, ನಟಿ ಕವಿತಾ ಗೌಡ, ಹೊಸ ಎಂಟ್ರಿಯಾದ್ರೂ ಪಡ್ಡೆಹೈಕಳ ಅಡ್ಡಾದಲ್ಲಿ ಧೂಳೆಬ್ಬಿಸುತ್ತಿರು ನಟ ಧನ್ವೀರ್ ಗೌಡ, ನಟಿ ಸಂಯುಕ್ತ ಹೊರನಾಡ್ ಇಂದು ಸರ್ಕಾರಿ ಶಾಲೆ ಉಳಿಸಿ ಆಂದೋಲನದಲ್ಲಿ ಭಾಗಿಯಾದ್ರು.
ಅಧ್ಯಕ್ಷರ ಪ್ರಾಸ್ತಾವಿಕ ನುಡಿಗಳು
Posted by ಸರ್ಕಾರಿ ಶಾಲೆ ಉಳಿಸಿ – Save Govt Schools on Wednesday, September 25, 2019
ಮಂಡ್ಯ ಜಿಲ್ಲೆಯ ದ್ಯಾಪಸಂದ್ರ ಗ್ರಾಮದ ಸರ್ಕಾರಿ ಶಾಲೆ ಅಭಿವೃದ್ಧಿ ಕಾರ್ಯಕ್ಕೆ ಚಲನೆ
ಸರ್ಕಾರಿ ಶಾಲೆ ಉಳಿಸಿ @Anil Shetty
Posted by ಸರ್ಕಾರಿ ಶಾಲೆ ಉಳಿಸಿ – Save Govt Schools on Thursday, September 26, 2019
IBM India ಕಂಪನಿಯಿಂದ ಬಂದ ಸ್ವಯಂಸೇವಕರ ಮಾತುಗಳು
IBM India ಕಂಪನಿಯಿಂದ ಬಂದ ಸ್ವಯಂಸೇವಕರ ಮಾತುಗಳು
Posted by ಸರ್ಕಾರಿ ಶಾಲೆ ಉಳಿಸಿ – Save Govt Schools on Friday, September 27, 2019
ಸರ್ಕಾರಿ ಶಾಲೆ ಮಕ್ಕಳಿಂದ ಸ್ವಚ್ಛ ಭಾರತ ಮತ್ತು ಪ್ಲಾಸ್ಟಿಕ್ ರಹಿತ ಗ್ರಾಮ
ದ್ಯಾಪಸಂದ್ರ ಗ್ರಾಮದ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವುದಲ್ಲದೆ ಗ್ರಾಮವನ್ನು ಕೂಡ ಮಾದರಿ ಗ್ರಾಮವನ್ನಾಗಿಸಲು ಶ್ರಮಿಸುತ್ತಿರುವ ಸ್ವಯಂ ಸೇವಕರು ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ ಎರಡು ರಂದು ಪ್ಲಾಸ್ಟಿಕ್ ಮುಕ್ತ ದ್ಯಾಪಸಂದ್ರ ಕ್ಕೆ ಚಾಲನೆ ನೀಡಿ ಗ್ರಾಮ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು
ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಂಘ ರಚನೆ
ಸರ್ಕಾರಿ ಶಾಲೆ ಉಳಿಸಿ ತಂಡವು ತುಮಕೂರಿನ ಸಿರಾದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿ ಸಂಘವನ್ನು ರಚಿಸಿದರು. ಈ ಸಂಘದ ಧ್ಯೆಯೆಯು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದಾಗಿದೆ.
ಚಿತ್ರ ನಟ ಅನಿರುಧ್ ಅವರ ಜೊತೆ ಸರ್ಕಾರಿ ಶಾಲೆ ಉಳಿಸಿ ತಂಡದೊಂದಿಗೆ ಭೇಟಿ
ಚಿತ್ರ ನಟ ಅನಿರುದ್ಧ ರನ್ನು ಭೇಟಿ ಮಾಡಿ ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಳ್ಳುವಂತೆ ವಿನಂತಿಸಿಕೊಂಡ ಸರ್ಕಾರಿ ಶಾಲೆ ಉಳಿಸಿ ತಂಡ .ಚಿತ್ರದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ಸುನಿಲ್ ಕುಮಾರ್, ಸಾಯಿಪ್ರಕಾಶ್,ವಂದನಾ,ವಿನಯ್ ಅವರಿದ್ದಾರೆ.
*ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಮುಖ್ಯಸ್ಥ ಅನಿಲ್ ಶೆಟ್ಟಿ ಇಂದ 7 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ*
ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ ಅನಿಲ್ ಶೆಟ್ಟಿ ಕಳೆದ ವರ್ಷ ಸರ್ಕಾರಿ ಶಾಲೆ ಉಳಿಸಿ ಆಂದೋಲನ ಪ್ರಾರಂಭಿಸಿದರು.