ಸಮರ್ಪಕ “ ರಾಜ್ಯ ಶಿಕ್ಷಣ ನೀತಿ “ ರೂಪಿಸುವಂತೆ ಒತ್ತಾಯಿಸಲು ಪ್ರಾರಂಭವಾದ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಜನಸ್ಪಂದನೆ ದೊರಕಿದ್ದು ಈಗಾಗಲೇ ಕರ್ನಾಟಕ ರಾಜ್ಯದಾದ್ಯಂತ ೨ ಲಕ್ಷಕ್ಕೂ ಹೆಚ್ಚು ಜನರು ಆಂದೋಲನದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರ ನಟರನ್ನು ಸೇರಿಸಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರು ಈ ಆಂದೋಲನದ ಜೊತೆ ಕೈಜೋಡಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಉಜ್ಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಯಲ್ಲಿ ಓದಿ ಮುಂದೆಬಂದಿರುವ ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ನೇತೃತ್ವದಲ್ಲಿ ಪ್ರಾರಂಭವಾದ ಈ ಆಂದೋಲನ ಎಂದು ಜನಾಂದೋಲನವಾಗಿ ಮಾರ್ಪಟಿದ್ದು ಅನೇಕ ಶಿಕ್ಷಣ ಪ್ರೇಮಿಗಳು ಆಂದೋಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ನಮ್ಮ ಗುರಿ:
- ಸಮರ್ಪಕ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದು.
- ಎಲ್ಲರಿಗು ಉಚಿತ ಮತ್ತು ಮೌಲ್ಯಯುತವಾದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು. ಮುಖ್ಯವಾಗಿ ೧ ರಿಂದ ೧೨ ತರಗತಿಯವರೇ ಎಲ್ಲರಿಗು ಉಚಿತ ಶಿಕ್ಷಣ ಮತ್ತು ಹೆಣ್ಣುಮಕ್ಕಳಿಗೆ ಉಚಿತ ಪದವಿ ಶಿಕ್ಷಣ.
- ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನದಲ್ಲಿ ಆದ ಸಾಧಕ ಭಾದಕಗಳ ಬಗ್ಗೆ ಶ್ವೇತಪತ್ರವನ್ನು ಹೊರಡಿಸುವುದು.
- ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಪ್ರೋತ್ಸಹಿಸುವುದು.
- ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ಚುನಾಯಿತ ಸರ್ಕಾರದ ಮತ್ತು ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡುವುದು.
- ಅತ್ಯುತ್ತಮವಾಗಿ ಈ ಹಿಂದೆ ನಡೆಯುತ್ತಿದೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಯಥಾಸ್ಥಿತಿಗೆ ತರುವುದು.
- ನಮ್ಮ ಗುರಿಯನ್ನು ಮುಟ್ಟಲು ಶಿಕ್ಷಣ ಕ್ಷೇತ್ರದಲ್ಲಿ ಸಮರ್ಥ ನಾಯಕರುಗಳನ್ನು ತಯಾರುಮಾಡುವುದು ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದವರನ್ನು ಗುರುತಿಸಿ ಸನ್ಮಾನಿಸುವುದು.
- IIEd – ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ – ವಿಶ್ವದರ್ಜೆಯ ಶಿಕ್ಷಕರ ತರಬೇತಿ ಸಂಸ್ಥೆಯನ್ನು ಸ್ಥಾಪಿಸುವುದು