ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳಲು ಮುಂದಾದ ನಟಿ ಪ್ರಣೀತಾ ಸುಭಾಷ್

ನಮ್ಮ ಆಂದೋಲನದ ವತಿಯಿಂದ ಚಿತ್ರ ನಟಿ ಪ್ರಣೀತಾ ಸುಭಾಷ್ ಅವರನ್ನು “ ಶಿಕ್ಷಣ ರಾಯಭಾರಿ “ ಆಗಿ ನೇಮಕ ಮಾಡಲಾಯಿತು.

ಪ್ರಣೀತ ಅವರು ಸರ್ಕಾರಿ ಶಾಲೆ ಒಂದನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದು ಅಧಕ್ಕಾಗಿ 5 ಲಕ್ಷ ರೂಪಾಯಿ ಅನ್ನು ಧಾನ ಮಾಡಿದ್ದಾರೆ. ಚೆಕ್ಕನ್ನು ಆಂದೋಲನದ ರೂವಾರಿ ಅನಿಲ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ನಮ್ಮ ಆಂದೋಲನದ ವತಿಯಿಂದ ಹಾಸನ ಜಿಲ್ಲೆಯಲ್ಲಿ ಒಂದು ಸರ್ಕಾರಿ ಶಾಲೆಯನ್ನು ಗುರುತಿಸಿ ಅದನ್ನು ಪ್ರಣೀತಾ ಸುಭಾಷ್ ಅವರ ಹೆಸರಿನಲ್ಲಿ ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಮುಖ್ಯಸ್ಥ ಅನಿಲ್ ಶೆಟ್ಟಿ ಹೇಳಿದರು.

ಸರ್ಕಾರಿ ಶಾಲೆ ಉಳಿಸಿ ಆಂದೋಲನದ ವತಿಯಿಂದ ಇನ್ನು ಅನೇಕ ಚಿತ್ರ ನಟರನ್ನು ಮತ್ತು ಸಮಾಜದ ಗಣ್ಯ ವ್ಯಕ್ತಿಗಳನ್ನು “ ಶಿಕ್ಷಣ ರಾಯಭಾರಿಗಳಾಗಿ “ ನೇಮಿಸಿ ಅವರ ಮೂಲಕ ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗುವುದು.

ನೀವು ಇಷ್ಟಪಡಬಹುದು

1 comment