*ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಮುಖ್ಯಸ್ಥ ಅನಿಲ್ ಶೆಟ್ಟಿ ಇಂದ 7 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ*

ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ ಅನಿಲ್ ಶೆಟ್ಟಿ ಕಳೆದ ವರ್ಷ ಸರ್ಕಾರಿ ಶಾಲೆ ಉಳಿಸಿ ಆಂದೋಲನ ಪ್ರಾರಂಭಿಸಿದರು.

ಅನೇಕ ಚಿತ್ರನಟರನ್ನು ಒಟ್ಟುಗೂಡಿಸಿ ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಅನಿಲ್ ಶೆಟ್ಟಿ ತಾನು ಒಂದಿರುವ ಸರ್ಕಾರಿ ಶಾಲೆಗೇ ಕೊಡುಗೆಯಾಗಿ ತನ್ನ ಸ್ವಂತ ಖರ್ಚಿನಿಂದ ಶಾಲಾ ಮಕ್ಕಳಿಗಾಗಿ ಸುಸರ್ಜಿತ ಕೊಠಡಿಯೊಂದನ್ನು 7 ಲಕ್ಷ ವೆಚ್ಚ ಮಾಡಿ ಕಟ್ಟಿಕೊಟ್ಟಿದ್ದು ಇತ್ತೀಚಿಗೆ ಅದರ ಉದ್ಘಾಟನೆ ನಡೆಯಿತು.

ಸರ್ಕಾರಿ ಶಾಲೆಯಲ್ಲಿ ಕಲಿತು ಯಶಸ್ವಿಯಾದವರು ತಮ್ಮ ತಮ್ಮ ಶಾಲೆಗಳ ಅಭಿವೃದ್ಧಿಕೆಲಸದಲ್ಲಿ ತೊಡಗಿಕೊಳ್ಳುವಂತೆ ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಕಾರ್ಯಕರ್ತರು ಅಭಿಯಾನ ನೆಡೆಸುತ್ತಿದ್ದಾರೆ.

ನೀವು ಇಷ್ಟಪಡಬಹುದು

Leave a Reply

Your email address will not be published. Required fields are marked *