ಸರ್ಕಾರಿ ಶಾಲೆ ಉಳಿಸಿ ಆಂದೋಲನದ ವತಿಯಿಂದ ಸಂಗೀತ ಸಂಜೆ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ನಿಧಿ ಸಂಗ್ರಹಣೆ

ನಾವು ಕಳೆದ ಅನೇಕ ದಿನಗಳಿಂದ ಸರ್ಕಾರಿ ಶಾಲೆ ಉಳಿಸಿ ಆಂದೋಲನವನ್ನು ನಡೆಸುತ್ತಿದ್ದು ಕರ್ನಾಟಕದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ .

ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನರು ನಮ್ಮೊಂದಿಗೆ ಕೈಜೋಡಿಸಿದ್ದು ಅನೇಕ ಗಣ್ಯ ವ್ಯಕ್ತಿಗಳು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದೆಬಂದಿದ್ದಾರೆ.

ನಮ್ಮ ಆಂದೋಲನದ ಒಂದು ಅಂಗವಾಗಿ ನಾವು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ನಿಧಿ ಕ್ರೋಡೀಕರಿಸುತ್ತಿದ್ದು ಪ್ರತಿಷ್ಠಿತ ಗ್ರಾಮಿ ಪ್ರಶ್ಯತ್ತಿ ವಿಜೇತ ಸಂಗೀತ ಸಂಯೋಜಕ ರಿಕ್ಯ್ ಕೇಜ್ ಸಂಗೀತ ಸಂಜೆ ನೆಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಸಂಗ್ರಹವಾಗಿರುವ ಹಣವನ್ನು ಈ ಕಾರ್ಯಕ್ಕೆ ಬಳಸಲಾಗುವುದು. ಖ್ಯಾತ ಕಲಾವಿದ ವಿಲಾಸ್ ನಾಯಕ್ ಕೂಡ ಶಿಕ್ಷಣದ ಮಹತ್ವದ ಬಗ್ಗೆ ತಿಳಿಹೇಳುವ ಚಿತ್ರ ಬಿಡಿಸಿ ಅದನ್ನು ೨ ಲಕ್ಷ ರೂಪಾಯಿಗೆ ಮಾರಾಟ ಮಾಡಿ ಬಂದ ಹಣವನ್ನು ಶಾಲೆಗಳ ಅಭಿವೃದಿಗೆ ಕೊಟ್ಟರು. ಸೆಂಚುರಿ ಗ್ರೂಪ್ ಮುಖ್ಯಸ್ಥ ರವೀಂದ್ರ ಪೈ ಚಿತ್ರವನ್ನು ಹರಾಜಿನಲ್ಲಿ ಕೊಂಡುಕೊಂಡರು.

ಬಹುಭಾಷಾ ನಟಿ *ಪ್ರಣೀತ ಸುಭಾಷ್ * ಅವರು ತಾವು ಹಾಸನದಲ್ಲಿ ದತ್ತು ತೆಗೆದುಕೊಂಡಿರುವ ಸರ್ಕಾರಿ ಶಾಲೆಯ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.

ದೆಹಲಿಯ ಶಾಲೆಗಳನ್ನು ಅಭಿವೃದಿಪಡಿಸಿದ *ಶಿಕ್ಷಣ ತಜ್ಞೆ ಅತೀಶೀ * ಅವರು ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಕ್ಷಣಕ್ಕಾಗಿ 100 ಕೋಟಿ ಧಾನ ಮಾಡಿದ ರವಿಶಂಕರ್ ಡಕೋಜು ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಆಂದೋಲನದ ರೂವಾರಿ ಅನಿಲ್ ಶೆಟ್ಟಿ “ ಬಡತನ ನಿರ್ಮೂಲನೆಗೆ ಇರುವ ಒಂದೇ ಅಸ್ತ್ರ ಶಿಕ್ಷಣ. ಕರ್ನಾಟಕದ ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಿಗುವಂತೆ ಮಾಡುವುದೇ ನಮ್ಮ ಐಕೈಕ ಗುರಿ “ ಎಂದರು.

ಉದ್ಯಮಿಗಳಾದ ಸಂದೀಪ್ ಮೈನಿ, ಅನಿಕೇತ್ ಜೈನ, ಸಾಕೇತ್ ಜಲಾನ್, ಮಿಮಿ ಪಾರ್ಥಸಾರಥಿ, ಶುಭಾಂಕರ್ , ಪ್ರಸಾದ್ ಲೆಲ್ಲ ಮತ್ತು ಅಭಿಜಿತ್ ಪ್ರಸಾದ್ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಹಣವನ್ನು ಕೊಡುವ ಘೋಷಣೆ ಮಾಡಿದರು.

ಚಿತ್ರ ನಟರಾದ *ಪ್ರಜ್ವಲ್ ದೇವ್ರಾಜ್ ಮತ್ತು ಸಂಯುಕ್ತ ಹೊರನಾಡ * ಕೊಡ ಶಾಲೆಗಳನ್ನು ದತ್ತು ಸ್ವೀಕರಿಸಲು ಮುಂದಾದರು

ಈ ಕಾರ್ಯಕ್ರಮದಲ್ಲಿ ನಗರದ ಅನೇಕ ಗಣ್ಯ ವ್ಯಕಿಗಳು ಹಾಗು ಚಿತ್ರರಂಗದ ಕಲಾವಿದರು ಭಾಗವಹಿಸಿದ್ದರು. ಇಸ್ರೇಲ್ ದೇಶದ ಪ್ರತಿನಿಧಿಯಾದ * ಡಾನಾ ಕುರ್ಷ್ * ಕೂಡ ಭಾಗವಹಿಸಿದ್ದರು

ನೀವು ಇಷ್ಟಪಡಬಹುದು

Leave a Reply

Your email address will not be published. Required fields are marked *