ಮ್ಯೂಸಿಕ್ ಫ್ಲಾಶ್ ಮಾಬ್ ಮೂಲಕ ಧ್ಯೇಯ ಗೀತೆ ಬಿಡುಗಡೆ

ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ಅವರ ನೇತೃತ್ವದಲ್ಲಿ ನೆಡೆಯುತ್ತಿರುವ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ರಾಜ್ಯ ಸರ್ಕಾರ ಕೂಡ ಸ್ಪಂದಿಸಿದೆ.

ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ಜನರನ್ನು ಹುರಿದುಂಬಿಸಲು ಆಂದೋಲನದ ಧ್ಯೇಯ ಗೀತೆ ( anthem ) ರಚಿಸಲಾಗಿದ್ದು ಗ್ರಾಮಿ ಪ್ರಶಸ್ತಿ ವಿಜೇತ *ರಿಕ್ಯ್ ಕೇಜ್ * ಸಂಗೀತ ಸಂಯೋಜನೆ ಮಾಡಿದ್ದೂ ಖ್ಯಾತ ಗಾಯಕ ವಾಸು ದೀಕ್ಷಿತ್ ಹಾಡಿದ್ದಾರೆ.

ನಿನ್ನೆ   ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಬೃಹತ್ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ೨೦೦ ಕ್ಕೂ ಹೆಚ್ಚು ಸಂಗೀತ ಕಲಾವಿದರು ಪ್ರದರ್ಶನದ ಮೂಲಕ ಧ್ಯೇಯ ಗೀತೆ ಬಿಡುಗಡೆ ಮಾಡಿದರು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಧ್ಯೇಯ ಗೀತೆಯನ್ನು  ಆದರಿಸಿ ನೃತ್ಯ ಪ್ರದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಸ ಪ್ರ ಹಿ ಪ್ರ ಶಾಲೆ ಕಾಸರಗೋಡು ಚಿತ್ರದ ನಿರ್ದೇಶಕ *ರಿಷಬ್ ಶೆಟ್ಟಿ * ಕೂಡ ಭಾಗವಹಿಸಿದ್ದರು.

ನೀವು ಇಷ್ಟಪಡಬಹುದು