ಚಿತ್ರ ನಟಿ ಪ್ರಣೀತಾ ಸುಭಾಷ್ ಅವರಿಂದ ಹಾಸನ ಜಿಲ್ಲೆಯ ಬಾಲುಘಟ್ಟ ಗ್ರಾಮದ ಸರ್ಕಾರಿ ಶಾಲೆ ದತ್ತು ಸ್ವೀಕಾರ

ಸರ್ಕಾರಿ ಶಾಲೆ ಉಳಿಸಿ ಆಂದೋಲನ ಈಗಾಗಲೇ ರಾಜ್ಯದಾದ್ಯಂತ ಹರಡುತ್ತಿದ್ದು ಅನೇಕ ಗಣ್ಯ ವ್ಯಕ್ತಿಗಳು ಕೈಜೋಡಿಸುತ್ತಿದ್ದಾರೆ.

ಆಂದೋಲನದ ಒಂದು ಬಹುಮುಖ್ಯ ಭಾಗ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅದನ್ನು ಅಭಿವೃದ್ಧಿಗೊಳಿಸುವುದು.

ಈಗಾಗಲೇ ಚಿತ್ರ ನಟಿ ಪ್ರಣೀತಾ ಸುಭಾಷ್ ಮತ್ತು ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ಅವರು ಹಾಸನ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಬಾಗೂರಿನಲ್ಲಿರುವ ಬಳ್ಳೂಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಳ್ಳಲು ನಿಶ್ಶಯಿಸಿದ್ದು ಶಾಲೆಯನ್ನು ನೋಡಲು ಇಂದು ಗ್ರಾಮಕ್ಕೆ ಆಗಮಿಸಿದ್ದರು.

ಶಿಕ್ಷಣ ರಾಯಭಾರಿಯಾಗಿ ನೇಮಕಗೊಂಡ ನಟಿ ಪ್ರಣೀತಾ ಸುಭಾಷ್ ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮಸ್ಥರ ನೆರವಿನ್ನಿಂದ ಶಾಲೆಯನ್ನು ಅಭಿವೃದ್ಧಿಪಡಿಸಲು ಸರ್ಕಾರಿ ಶಾಲೆ ಉಳಿಸಿ ಆಂದೋಲನದೊಂದಿಗೆ ಕೈಜೋಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅನಿಲ್ ಶೆಟ್ಟಿ ಸಮರ್ಪಕ ಶಿಕ್ಷಣ ನೀತಿ ರೂಪಿಸುವಂತ್ತೆ ಸರ್ಕಾರವನ್ನು ಒತ್ತಾಯಿಸಲು ಪ್ರಾರಂಭವಾದ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಎರಡು ಲಕ್ಕ್ಷಕ್ಕೂ ಹೆಚ್ಚು ಜನರು ಮಿಸ್ಸೇಡ್ ಕಾಲ್ ಕೊಡುವುದರ ಮೂಲಕ ಬೆಂಬಲಿಸಿದ್ದಾರೆ ಮತ್ತು ಸರ್ಕಾರದ ಜೊತೆ ಈ ಬಗ್ಗೆ ಮಾತುಕತೆಗಳು ನೆಡೆಯುತ್ತಿದೆ ಎಂದರು.

ನಟಿ ಪ್ರಣೀತಾ ಸುಭಾಷ್ ಶಿಕ್ಷಣದ ಮಹತ್ತವಧ ಬಗ್ಗೆ ಮಾತನಾಡಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನೀವು ಇಷ್ಟಪಡಬಹುದು